ಒಳ ಮೀಸಲಾತಿ ಸಂಬಂಧ ಬಿಜೆಪಿಯ ನಾಯಕರು ಇಷ್ಟೆಲ್ಲ ಮಾತನಾಡುತ್ತಿದ್ದಾರಲ್ಲ, ಒಂದಾದರೂ ಬಿಜೆಪಿ ರಾಜ್ಯಗಳಲ್ಲಿ ಇದನ್ನು ಜಾರಿಗೆ ತಂದಿದ್ದಾರಾ? ಇವರು ಕೊಂಡಾಡ್ತಾರಲ್ಲ ಇಡೀ ಭಾರತದಲ್ಲಿ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಂತ ಹೇಳ್ತಾರಲ್ಲ ಎಂದರು.
ಮಿಕ್ಕಿದ್ದೆಲ್ಲ ಬಿಜೆಪಿ ರಾಜ್ಯಗಳಿದ್ದಾವೆ ಅಂತಾರಲ್ಲ, ಅಲ್ಲಿ ಯಾವುದಾದರೂ ಒಂದು ರಾಜ್ಯದಲ್ಲಾದರೂ ಒಳ ಮೀಸಲಾತಿ ತಂದಿದ್ದಾರಾ? ಜನಸಂಖ್ಯೆಗೆ ಅನುಗುಣವಾಗಿ ಯಾವುದಾದರು ಒಂದು ರಾಜ್ಯದಲ್ಲಿ ಒಳ ಮೀಸಲಾತಿಸಂದಿದ್ದಾರಾ? ಬಿಜೆಪಿ ರಾಜ್ಯದಲ್ಲಿ ಯಾಕೆ ಒಳ ಮೀಸಲಾತಿ ಜಾರಿಗೆ ಆಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ದಲಿತ ನಾಯಕತ್ವ ವಿಚಾರಕ್ಕೂ ಒಳ ಮೀಸಲಾತಿ ವಿಚಾರಕ್ಕೂ ಯಾವುದೇ ಸಮಸ್ಯೆ ಇಲ್ಲ ಯಾವ ಹಿನ್ನಡೆಯೂ ಇಲ್ಲ. ನಮ್ಮ ಲೀಡರ್ ಪರಮೇಶ್ವರ್ ರವರು ಇದ್ದಾರೆ, ಮುನಿಯಪ್ಪನವರು ಇದ್ದಾರೆ ಮಹದೇವಪ್ಪ ಅವರು ಇದ್ದಾರೆ. ನೀವು ನನ್ನನ್ನು ನಾಯಕ ಎಂದು ಒಪ್ಪಿಕೊಳ್ಳುವುದಾದರೆ ನಾನು ರೆಡಿ ಇದ್ದೇನೆ ಎಂದು ಹೇಳಿದರು.
