0 Shares

ಮಂಗಳೂರು : ತಾಲೂಕಿನ ಸಜಿಪ ಪಡು ತಲೆಮೊಗರು ಮಸೀದಿ ವಠಾರದಲ್ಲಿ ಇತ್ತಂಡಗಳ ನಡುವೆ ನಡೆದ ಮಾರಾಮಾರಿಗೆ ಸಂಬಂಧಿಸಿದಂತೆ ಇತ್ತಂಡಗಳಿಂದ ದೂರು ಮತ್ತು ಪ್ರತಿದೂರು ದಾಖಲಾಗಿದೆ.

ಉಳ್ಳಾಲ ಸಜಿಪ ಪಡು ನಿವಾಸಿ ಅಬ್ದುಲ್‌ ನವಾಝ್‌ (42) ಎಂಬವರ ದೂರಿನಂತೆ, ಮಾ.22 ರಂದು ಬೆಳಿಗ್ಗೆ, ಪಿರ್ಯಾದುದಾರರು ಮತ್ತು ಅವರ ಸಂಬಂಧಿ ದಾವೂದ್‌ ಜೊತೆಯಲ್ಲಿ ತಲೆಮೊಗರು ಮಸೀದಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಸದ್ರಿ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್‌ ಎಂಬಾತನ ಅಂಗಡಿಯ ಬಳಿ ಆರೋಪಿತರಾದ ಶೌಕತ್‌, ಇಸಾಕ್‌, ಸಫಿಕ್‌, ಯಾಕೂಬ್‌, ಮಹಮ್ಮದ್‌ ಮುಸ್ತಫಾ, ನಾಸಿರ್‌ ಹಾಗೂ ನಿಝಾಲ್‌ ರವರು ಗುಂಪು ಕಟ್ಟಿಕೊಂಡು ನಿಂತಿದ್ದರು.

ಅಬ್ದುಲ್‌ ನವಾಝ್‌ ಹಾಗೂ ದಾವೂದ್‌ ರವರು ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿ ತೆರಳಿದ್ದಾರೆ. ಹಲ್ಲೆಯಿಂದಾದ ಗಾಯಕ್ಕೆ ನವಾಝ್‌ ಹಾಗೂ ದಾವೂದ್‌ ರವರು ಉಪಚರಿಸಿ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 46/2026, ಕಲಂ: 189(2), 191(2), 352, 351(2), 109(1), 118(1), 115(2) r/w 190 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ, ಉಳ್ಳಾಲ ಸಜಿಪ ಪಡು ನಿವಾಸಿ ಅಬ್ದುಲ್ ಗಫೂರ್ (48) ಎಂಬವರು ನೀಡಿದ ಪ್ರತಿದೂರಿನಂತೆ, ಆರೋಪಿಗಳಾದ ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್, ಅಶ್ರಫ್ ಸಾಹೇಬ್ ಎಂಬವರುಗಳು ಸಜಿಪ ಪಡು ಗ್ರಾಮದ ತಲೆಮೊಗರು ಮಸೀದಿ ಬಳಿ ಗಫೂರ್‌ ತಡೆದು ನಿಲ್ಲಿಸಿ ಅವ್ಯಾಚವಾಗಿ ಬೈದು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುದ್ದಾರೆ.

ಹಲ್ಲೆಯಿಂದಾದ ಗಾಯಕ್ಕೆ ಗಫೂರ್ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 47/2026, ಕಲಂ: 126(2), 189(2), 191(2), 118(1), 115(2), 352, 351(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

ಮುಂದುವರಿದಂತೆ, ಉಳ್ಳಾಲ ಸಜಿಪ ಪಡು ನಿವಾಸಿ ಶೌಕತ್ ಆಲಿ (40) ಎಂಬವರು ನೀಡಿದ ದೂರಿನಂತೆ, ಸದ್ರಿಯವರು ಮಾ.22 ರಂದು ಬೆಳಿಗ್ಗೆ, ಸಜೀಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ, ಪ್ರಕರಣದ ಆರೋಪಿಗಳಾದ ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಫ್, ಆಶಿಕ್ ರವರುಗಳು ಪಿರ್ಯಾದಿದಾರರ ಅಂಗಡಿಗೆ ಬಂದು, ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಪಿರ್ಯಾದಿದಾರರ ಸಂಬಂಧಿ ರಬಿಯತ್ ರವರಿಗೆ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಗಲಾಟೆ ಬಿಡಿಸಲು ಬಂದ ಸಫಾನಾ, ನಿಜಾಲ್ , ಇಸಾಕ್, ಆಶ್ರಫ್ ಎಂಬವರಿಗೂ ಹಾಗೂ ಶೌಕತ್‌ ಆಲಿಯವರಿಗೂ ಅವಾಚ್ಯವಾಗಿ ಬೈದು ತಲವಾರಿನಿಂದ ಹಲ್ಲೆ ಯತ್ನಿಸಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಪಿರ್ಯಾದಿದಾರರ ಸಂಬಂಧಿ ಆಯಿಷಾ ಎಂಬವರಿಗೆ ಆರೋಪಿಗಳು ಜೀವಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2026, ಕಲಂ: 189(2), 191(2), 191(3), 115(2), 118(1), 74, 352, 351(2), 329(3), 109 ಜೊತೆಗೆ 190 ಬಿಎನ್ಎಸ್ ಮತ್ತು ಕಲಂ: 21 (1)(ಎ) Arms Act ರಂತೆ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತ್ತಂಡಗಳ ಪೈಕಿ ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯ ಆಗುವಂತಹ ಗಾಯಗಳಾಗಿರುವುದಿಲ್ಲ. ಎಲ್ಲಾ ಗಾಯಾಳುಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

0 Shares

By admin

Leave a Reply

Your email address will not be published. Required fields are marked *