0 Shares

ಹುಕ್ಕೇರಿ : ಹುಕ್ಕೇರಿ ನಗರದ ಹನುಮಾನ ಹೋಟೆಲ ಮಾಲಿಕ ರಾಮ ಹಳ್ಳೂರಿ ತಾನು ನಡೆಸುತ್ತಿದ್ದ ಹೋಟೆಲ್‌ನಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ಜರುಗಿದೆ.

ಇಂದು ಮುಂಜಾನೆ ಸಮಯದಲ್ಲಿ ಸುಮಾರು ಐವತ್ತು ವರ್ಷದ ರಾಮ ಹಳ್ಳೂರಿ ತಾನು ನಡೆಸುತ್ತಿದ್ದ ಹೋಟೆಲ್ ಓಪನ್ ಮಾಡಿ ಹಗ್ಗದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ, ಸಾವಿಗೆ ಕಾರಣ ಅಡುಗೆ ಅನಿಲ ಅಭಾವ ಮತ್ತು ಸಾಲ ಭಾದೆ ಎಂದು ತಿಳಿದು ಬಂದಿದೆ.

ರಾಮ ಹಳ್ಳೂರಿ ಯವರ ಮಗ ಉದಯ ಹಳ್ಳೂರಿ ಮಾದ್ಯಮಗಳೊಂದಿಗೆ ಮಾತನಾಡಿ ಕಳೆದ ಒಂದು ವಾರದಿಂದ ಅಡುಗೆ ಅನಿಲ ಅಭಾವದಿಂದಾಗಿ ವ್ಯಾಪಾರ ಕುಂಟಿತಗೊಂಡಿತ್ತು ಪ್ರತಿ ದಿನ ಹೋಟೆಲ್ ಬಾಡಿಗೆ ಮತ್ತು ಸಾಲದ ಮೊತ್ತ ನೀಡಲು ತೊಂದರೆಯಾಗಿತ್ತು ಇದರಿಂದ ಬೆಸತ್ತು ಮಾನಸಿಕ ಸಿಮಿತ ಕಳೆದುಕೊಂಡು ಇಂದು ಮುಂಜಾನೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಈ ಸ್ಥಳಕ್ಕೆ ಹುಕ್ಕೇರಿ ಬೀಟ್ ಪೋಲಿಸ ರವಿ ಡಂಗ ಆಗಮಿಸಿ ಪರಶಿಲನೆ ನಡೆಸಿ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ಪೋಲಿಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

0 Shares

By admin

Leave a Reply

Your email address will not be published. Required fields are marked *