0 Shares

ದಾವಣಗೆರೆ : ಕಾಂಗ್ರೆಸ್ ಪಕ್ಷ ಸರ್ವ ಧರ್ಮ, ಸಕಲ ಜಾತಿಯವರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಾಗಿದ್ದು ಮಹಾತ್ಮ ಗಾಂಧಿ ಹೇಳುವ ಹಿಂದೂತ್ವವನ್ನು, ಅಧ್ಯಾತ್ಮವನ್ನು ಪಾಲಿಸುವ ಪಕ್ಷ. ಬಿಜೆಪಿ ನಾಥೂರಾಮ್ ಗೋಡ್ಸೆಯ ಹಿಂದೂತ್ವದಲ್ಲಿ ನಂಬಿಕೆ ಇರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಂಬಂಧ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ನನ್ನ ಹೆಸರಲ್ಲೇ ಶಿವ, ರಾಮ ಇದ್ದಾರೆ. ನಾನು ಹಿಂದೂ ಅಲ್ಲವಾ ? ನಮ್ಮ ಜೊತೆಗಿರುವ ಈ ಶ್ವರ್ ಖಂಡ್ರೆಯವರು ಹಿಂದೂ ಅಲ್ವಾ? ಎಂ.ಸಿ.ಸುಧಾಕರ್ ಅವರು ಹಿಂದೂ ಅಲ್ವಾ ಎಂದು ಪ್ರಶ್ನಿಸಿದರು.

ಗೋಡ್ಸೆಯ ಹಿಂದೂತ್ವ ಹೇಳಿಕೊಂಡು ಅಧಿಕಾರಕ್ಕೆ ಬರುವುದು, ಆಮೇಲೆ ಜನರನ್ನು ಮರೆತು , ಅಭಿವೃದ್ಧಿ ಮರೆತು ಹಣ ಲೂಟಿ ಹೊಡೆಯುತ್ತಾ ಕೂತರು. ಇದಕ್ಕೆ ಹಿಂದೂತ್ವವನ್ನು ಬಳಸಿಕೊಳ್ಳುವುದು ಬಿಜೆಪಿಗೆ ರೂಢಿ ಆಗಿದೆ ಎಂದು ಟೀಕಿಸಿದರು. ನಾವು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರು ಸೇರಿ ಎಲ್ಲಾ ಶ್ರಮಿಕ ವರ್ಗಗಳ ಸಾಲ ಮನ್ನಾ ಮಾಡಿ ಜನರಿಗೆ ನೆರವಾದೆವು.

ಆದರೆ, ಯಡಿಯೂರಪ್ಪ ಅವರಿಗೆ ಸಾಲ ಮನ್ನಾ ಮಾಡಿ ಎಂದರೆ, “ನಮ್ಮಲ್ಲಿ ಹಣ ಮುದ್ರಿಸುವ ಮೆಷಿನ್ ಇಲ್ಲ” ಎಂದು ಉಡಾಫೆಯಿಂದ ಅಧಿಕಾರ ಮುಗಿಸಿದರು. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ 29000 ಕೋಟಿ ಗುತ್ತಿಗೆದಾರರ ಹಣ ಬಾಕಿ ಉಳಿಸಿ ಹೋದರು. ಇದರಲ್ಲಿ 23 ಸಾವಿರ ಕೋಟಿ ತೀರಿಸಿದ್ದೀವಿ. ಉಳಿದದ್ದನ್ನೂ ತೀರಿಸ್ತೀವಿ ಎಂದರು.

ನಾವು ನುಡಿದಂತೆ ನಡೆದು ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹನ್ನೆರಡು ವರ್ಷದಲ್ಲಿ ತಾವೇ ಹೇಳಿದ್ದರಲ್ಲಿ ಒಂದನ್ನೂ ಜಾರಿ ಮಾಡಲಿಲ್ಲ. ಕೇವಲ ಅದಾನಿ ಮತ್ತು ಅಂಬಾನಿ ಇಬ್ಬರಿಗೆ ಮಾತ್ರ ಲಾಭ ಮಾಡಿಕೊಟ್ಟಿದ್ದನ್ನು ವಿವರಿಸಿದರು.

ಹೀಗಾಗಿ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು, ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

0 Shares

By admin

Leave a Reply

Your email address will not be published. Required fields are marked *