0 Shares

ಬೆಂಗಳೂರು : ಕರ್ನಾಟಕದಲ್ಲಿ ಗ್ಯಾಸ್​ ಸಿಗದೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ದಿನವಿಡಿ ದುಡಿಮೆ ಬಿಟ್ಟು ಬಂಕ್​ಗಳ ಬಳಿ ಗಂಟೆಗಟ್ಟಲೇ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೋ ಚಾಲಕರು ಹೈರಾಣಾಗಿ ಹೋಗಿದ್ದಾರೆ.

ಈ ಮಧ್ಯೆ ಆಟೋ ಗ್ಯಾಸ್ ಕೊರತೆ ಬಗ್ಗೆ ವಂದತಿಗಳು ಕೂಡ ಹರಿದಾಡಿದ್ದವು. ಸದ್ಯ ಆಟೋ ಎಲ್​ಪಿಜಿ ಸರಬರಾಜು ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.

ಆಟೋ ಎಲ್​ಪಿಜಿ ಸರಬರಾಜು ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. IOCL, BPC, HPC ಕಂಪನಿಗಳಿಂದ ಗ್ಯಾಸ್​ ಪೂರೈಕೆ ನಡೆಯುತ್ತಿದೆ.

ಏಪ್ರಿಲ್ 2ರಿಂದ ಏಪ್ರಿಲ್‌ 6ರವರೆಗೆ ದಿನನಿತ್ಯ ಸರಬರಾಜು ಆಗುತ್ತಿದೆ. ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್​ವರೆಗೂ ಪೂರೈಕೆ ಮಾಡಲಾಗಿದೆ. ಏಪ್ರಿಲ್ 5ರಂದು ಅತಿ ಹೆಚ್ಚು 94.11 MT ಸರಬರಾಜು ಮಾಡಲಾಗಿದೆ. ಆಟೋ ಚಾಲಕರು ಆತಂಕಪಡಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ. ಎಲ್​ಪಿಜಿ ಪೂರೈಕೆ ವ್ಯವಸ್ಥೆಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಏಪ್ರಿಲ್ 5ರಂದು ಗರಿಷ್ಠ 94.11 MT ಪೂರೈಕೆಯಾಗಿದೆ. ಆಟೋ ಚಾಲಕರಿಗೆ ಆತಂಕ ಬೇಡ, ಪೂರೈಕೆ ಮೇಲೆ ಸರ್ಕಾರದ ನಿಗಾ ಇದೆ. ರಾಜ್ಯದಲ್ಲಿನ ಆಟೋ ಮಾಲೀಕರು ಮತ್ತು ಚಾಲಕರುಗಳು ಆತಂಕ ಪಡದೇ ಮತ್ತು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಸಹಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ದಿನಾಂಕ – ಆಟೋ ಎಲ್​ಪಿಜಿ ಸರಬರಾಜು
ಏಪ್ರಿಲ್​ 2ರಂದು – 87.78
ಏಪ್ರಿಲ್​ 3ರಂದು – 86.05
ಏಪ್ರಿಲ್​ 4ರಂದು – 84.80
ಏಪ್ರಿಲ್​​ 5ರಂದು – 94.11
ಏಪ್ರಿಲ್​ 6ರಂದು – 83.58

ಕೈಗಾರಿಕಾ ವಲಯಕ್ಕೆ ಎಲ್​ಪಿಜಿ ಹಂಚಿಕೆ ಕುರಿತು ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್​ರಿಂದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಲಾಗಿದೆ.

ವಿವಿಧ ಕೈಗಾರಿಕಾ ವಲಯಗಳಿಗೆ ಶೇ.70ರಷ್ಟು LPG ಹಂಚಿಕೆಗೆ ನಿರ್ಧಾರ –
ಪಿಎನ್‌ಜಿ ಸುಧಾರಣೆ ತಂದ ರಾಜ್ಯಗಳಿಗೆ ಹೆಚ್ಚುವರಿ ಶೇ.10ರಷ್ಟು ಎಲ್‌ಪಿಜಿ
ಫಾರ್ಮಾ, ಫುಡ್, ಅಗ್ರಿಕಲ್ಚರ್ ಸೇರಿ ಪ್ರಮುಖ ವಲಯಗಳಿಗೆ ಅನಿಲ ಪೂರೈಕೆ
ಬೃಹತ್ LPG ಬಳಕೆಗೆ ದಿನಕ್ಕೆ 0.2 ಟಿಎಂಟಿ ಮಿತಿ ನಿಗದಿ
ನೈಸರ್ಗಿಕ ಅನಿಲ ಬಳಸಲು ಸಾಧ್ಯವಿಲ್ಲದ ಘಟಕಗಳಿಗೆ ಮೊದಲ ಆದ್ಯತೆ
ಸಿಜಿಡಿ ಘಟಕಗಳಿಗೆ ಪಿಎನ್‌ಜಿ ನೋಂದಣಿ ಕಡ್ಡಾಯ
ಪ್ಯಾಕೇಜಿಂಗ್, ಪೇಂಟ್, ಸ್ಟೀಲ್ ಮತ್ತು ಸೆರಾಮಿಕ್ ಘಟಕಗಳಿಗೆ ಸಿಗಲಿದೆ ನೆರವು
ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅನಿಲಪೂರೈಕೆ ವ್ಯವಸ್ಥೆ
ಮಾರ್ಚ್​​ 2026ರ ಬಳಕೆ ಆಧರಿಸಿ ಕೈಗಾರಿಕೆಗಳಿಗೆ ಇಂಧನ ಕೋಟಾ ನಿಗದಿ

0 Shares

By admin

Leave a Reply

Your email address will not be published. Required fields are marked *