0 Shares

ದೇವನಹಳ್ಳಿ : ಹೆಣ್ಣು ಮಕ್ಕಳ ಹೆಚ್ಚು ಎಂಬುದು ಹೇಳಿ ಅದರಿಂದ ದೊರೆತ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳಬಾರದು, ಮನೆಕೆಲಸ ಜೊತೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮನೆಯ ಸದಸ್ಯರು ಸಹಾಯವಾಗುವ ಪೂರಕವಾದ ವಾತಾವರಣ ಸೃಷ್ಟಿ ಮಾಡಿ, “ಪ್ರತಿಯೊಂದು ಹೆಣ್ಣು ಮಗುವು ಸಮಾನವಕಾಶ ಕೇಳುವ ಮೊದಲು ಸಾಮರ್ಥ್ಯ ಬೆಳಸಿಕೊಳ್ಳಿ” ಹಾಗೂ ಕೆಲವು ಹೆಣ್ಣು ಮಕ್ಕಳ ದುರ್ವತನೆಯ ಘಟನೆಗಳಿಂದ ಹೆಣ್ಣುಮಕ್ಕಳು ಸರಿಯಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಹಾಗಾಗಿ ಎಚ್ಚರಿಕೆಯಿಂದ ಮನ್ನಡೆಯಿರಿ ಎಂದು ಬೆಂಗಳೂತು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಅನುರಾಧ ಕೆ. ಸಲಹೆ ನೀಡಿದರು.

ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅನುಪಮಾ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ಸಮಾರಂಭದಲ್ಲಿ ಭಾಗವಹಿಸಿದ ಪುರುಷರಿಗೂ ಅಭಿನಂದನೆಗಳನ್ನು ತಳಿಸಿದರು,ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ವ್ಯಕ್ತಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಕರುಣೆ ಮತ್ತು ಸಮಾನತೆ ವ್ಯತ್ಯಾಸ ತಿಳಿದು ಸಮಾನವಕಾಶ ಕಲ್ಪಿಸಬೇಕು, ಮನೆಯಿಂದಲೇ ತಾಯಿಯಿಂದ ತಾರತಮ್ಯ ಪ್ರಾರಂಭವಾಗುತ್ತದೆ. ಮೊದಲು ಅದನ್ನು ಬಿಡಿ ಆಗ ಮಾತ್ರ ಮಹಿಳಾ ದಿನಾಚರಣೆ ಅರ್ಥಪೂರ್ಣ ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸೈನ್ಯಾಧಿಕಾರಿ ಲೆಪ್ಟಿನೆಂಟ್ ಭವ್ಯ ನರಸಿಂಹ ಮೂರ್ತಿ ಮಾತನಾಡಿ
ಲಿಂಗ ತಾರತಮ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಹಲವಾರು ಅಡೆತಡೆಗಳು ಹೆಚ್ಚು,ಮನೆಯಿಂದಲೇ ಮಕ್ಕಳಿಗೆ ತಂದೆಯಾದವರು ತಾಯಿಗೆ ಸಮಾನ ಸಹಕಾರ ನೀಡುವಂತೆ ಕಲಿಸಬೇಕು.

ಪ್ರಥಮ ಹಂತದಲ್ಲಿಯೇ ವಿದ್ಯೆ ನೀಡುವುರಲ್ಲೂ ಬೇಧ ಬಾವ ಮಾಡಬಾರದು, ಯಾವದೇ ಹಿಂಜರಿಕೆ ಮಾಡದೇ ತಮ್ಮ ಪ್ರತಿಯೊಂದು ಹೆಣ್ಣಿನ ಹಕ್ಕನ್ನು ಪಡೆಯುವಂತಾಗಬೇಕು, ಪ್ರತಿ ಒಂದು ಹೆಣ್ಣು ಮಗುವಿನ ಸುರಕ್ಷತೆಯ ಜವಾಬ್ದಾರಿ ಸಮಾಜದ್ದು ಸರ್ಕಾರದ್ದು ಅದನ್ನು ಹೊರತು ಪಡಿಸಿ ಹೆಣ್ಣು ಮಗುವನ್ನು ಕಟ್ಟಾಕಬೇಡಿ. ಅತ್ಯಾಚಾರಗಳಿಂದ ತಲೆತಗ್ಗಿಸಬೇಕಾಗಿರುವುದು ಸಮಾಜ ಸಂತ್ರಸ್ತ ಹೆಣ್ಣು ಮಗುವಲ್ಲ ಎಂದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಆಯ್ದಾ ಅರ್ಹ ಮಹಿಳಾ ಸಾಧಕಿಯರಿಗೆ, ಪ್ರೌಢಶಾಲಾ ವಿಭಾಗದ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಅನುಪಮಾ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇದೇ ಸಂಧರ್ಭದಲ್ಲಿದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ದುರ್ಗಾಶ್ರೀ, ಅಪರ ಜಿಲ್ಲಾಧಿಕಾರಿ ಆಯಿಷಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಟಕದ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ, ಗೌರವಧ್ಯಕ್ಷರಾದ ಇಒ ಶ್ರೀನಾಥ್ ಗೌಡ, ಜಿಲ್ಲಾ ಕಾರ್ಯಧ್ಯಕ್ಷ ಆದರ್ಶ, ಜಿಲ್ಲಾ ಉಪಾಧ್ಯಕ್ಷ ಯತೀಶ್ ಕುಮಾರ್, ಜಿಲ್ಲಾ ಸಂಘಟಕ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ಹರೀಶ್.ಕೆ ಮತ್ತು ಗೀತಾ, ಬೈರೇಗೌಡ ಇತರ ಪದಾಧಿಕಾರಿಗಳು, ತಾಲೂಕು ಮತ್ತು‌ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕ -ಶಿಕ್ಷಕಿಯರ ವೃಂದ ಭಾಗಿಯಾಗಿದ್ದರು.

0 Shares

By admin

Leave a Reply

Your email address will not be published. Required fields are marked *