ಮಂಡ್ಯ : ಕುಮಾರಸ್ವಾಮಿ ಅವರು ಯಾವಾಗಲೂ ಸರ್ಕಾರ ತೆಗೆಯುವುದರಲ್ಲಿರ್ತಾರೆ ಕೂರಲ್ಲ. ರಾಜ್ಯ ಸರ್ಕಾರ ತೆಗೆಯುವುದೆ ನನ್ನ ಅಜೆಂಡಾ ಹೆಚ್‌ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿಗೆ ಒಳ್ಳೆಯದಾಗಲಿ ಬೆಸ್ಟ್ ಆಫ್ ಲಕ್, ಅವರು ಯಾವಾಗಲೂ ತೆಗೆಯುವುದರಲ್ಲಿರ್ತಾರೆ ಕೂರಲ್ಲ. ಸರ್ಕಾರ ನೆಡೆಯುತ್ತಿದ್ರೆ ಅಮೇರಿಕಾಗೆ ಹೋಗಿ ಕುಳಿತುಕೊಳ್ತಾರಾ? ಜಾಗ ಕೊಟ್ಟಿದ್ದೇವೆ ಕುಮಾರಸ್ವಾಮಿ ಕೈಗಾರಿಕೆ ತರಲಿ. ನಮ್ಮ ಕೆಲಸ ಮುಗಿದಿದೆ ಭೂಮಿ ಪೂಜೆ ಯಾವಾಗ? ನನ್ನ ಕ್ಷೇತ್ರ ಅಭಿವೃದ್ಧಿ ಆಗಬೇಕು.
ಕುಮಾರಸ್ವಾಮಿಗೆ ನಮ್ಮ ಸಹಕಾರ ಕೊಡ್ತೇವೆ. ಸೆಮ್ಮಿಕಂಡಾಕ್ಟರ್, ಅಮೇರಿಕಾ ಕೂಡ ಮುಗಿತು. ARI ಗೆ ಜಾಗ ಕೊಟ್ಟಿದ್ದೇವೆ ನೋಡೋಣ ಇನ್ನು ಎಷ್ಟು ಪಿಚ್ಚರ್ ಬರುತ್ತೆ? 100% ಮೂಲ ಸೌಕರ್ಯ ಕೊಟ್ಟಿದ್ದೇವೆ. ನಮ್ಮ ಮೇಲೆ ಬಾಲ್ ಹಾಕಬೇಡಿ. ಅಮೇರಿಕಾ ಕಂಪನಿ, ಸಾಫ್ಟ್‌ವೇರ್ ಕಂಪನಿ ಹೋಯ್ತು. ಇವಾಗ ನೋಡೋಣ..? ನಾನು ಕುಮಾರಸ್ವಾಮಿ ಪರ ಇದ್ದೇನೆ ನಾನು ರಾಜಕೀಯ ಟೀಕೆ ಮಾಡಲ್ಲ ಎಂದರು.
