ನವದೆಹಲಿ : RSS ಅನ್ನು ರಿಜಿಸ್ಟರ್ ಮಾಡಿಸಬೇಕು ಎಂಬ ಪ್ರಿಯಾಂಕ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “RSS ಬಗ್ಗೆ ಯಾರು ಯಾರು ಮಾತನಾಡಿದ್ದಾರೋ, ಅವರನ್ನೇ ಈ ಬಗ್ಗೆ ಕೇಳಬೇಕು” ಎಂದು ಹೇಳಿದರು.
ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಲೋಕಲ್ ವಿಚಾರ. ಅದ ಬಗ್ಗೆ ನಾನು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಈ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವಿದೆ” ಎಂದು ಸ್ಪಷ್ಟಪಡಿಸಿದರು.
“ಯಾರು ಟೂರ್ ಹೋದರು, ಯಾರು ಎಲ್ಲಿಗೆ ಹೋದರು ಎಂಬುದನ್ನು ನಾನು ಪದೇ ಪದೇ ಮಾತನಾಡುವುದು ಸರಿಯಲ್ಲ. ಇಲ್ಲಿನ ಲೋಕಲ್ ನಾಯಕರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಹೇಳಿದರು. ರಾಜ್ಯಮಟ್ಟದ ವಿಚಾರಗಳಲ್ಲಿ ಸ್ಥಳೀಯ ನಾಯಕತ್ವವೇ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಖರ್ಗೆ ಪುನರುಚ್ಚರಿಸಿದರು.
