ಕೆಆರ್.ಪುರಂ : ದೊಡ್ಡ ದೊಡ್ಡ ಹೆಸರು ಬಳಸಿವರ್ಕ್ ಫ್ರಮ್ ಹೋಂ ಕೆಲಸದ ಆಫರ್ ನೀಡಿ ವಂಚನೆ ಆರೋಪ ಮಾಡಿದ್ದಾರೆ. ಸೋಷಿಯಲ್ ಮೀಡಿಯದಲ್ಲಿ ವರ್ಕ್ ಫ್ರಮ್ ಹೋಂ ಆಫರ್ ನೀಡಿ ವಂಚನೆ ಮಾಡುತ್ತಿದ್ದಾರೆ.
ತಿಂಗಳಿಗೆ 78 ಸಾವಿರ ಸಂಬಳದ ಉದ್ಯೋಗ ಕೊಡೋದಾಗಿ ವಂಚನೆ, ಸಾಹಿಲ್ ಘೌಶ್ ಪಾಷಾ, ರಾಜೀವ್ ಶುಕ್ಲಾ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾಸ್ಕರ್ ರಾವ್ ಸೇರಿದಂತೆ ಕೆಲವರ ಹೆಸರನ್ನು ಬಳಕೆ ಮಾಡಿರೋ ಆರೋಪ ವರದಿಯಾಗಿದೆ.
ಆರಂಭದಲ್ಲಿ ವರ್ಕ್ ಫ್ರಂ ಹೋಂ ಸಂಬಂಧ ಸೋಷಿಯಲ್ ಮೀಡಿಯ ಪೋಸ್ಟ್ ಮಾಡಿ, ಸುಮಾರು 1.5 ಲಕ್ಷ ಫಾಲೋವರ್ಸ್ ಹೊಂದಿರೋ ಸಾಹಿಲ್ ಘೌಶ್ ಅಕೌಂಟ್ ಓಪನ್ ಮಾಡಿದ್ದಾರೆ. ಕೆ ಆರ್ ಪುರಂ ನ ಪಿಪಿಎಫ್ ಎ (ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ) ಬಳಿ ಬಂದು ದಾಖಲೆ ನೀಡಲು ಹೇಳಿದರು.
ನಂತರ ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೆಟ್ ಮಾಡಿ ಅದರಲ್ಲಿ ಮಾಹಿತಿಗಳು ಹಂಚಿಕೆಯಾಗಿದೆ. ಝೂಮ್ ಲಿಂಕ್ ನೀಡಿ ಮೀಟಿಂಗ್ನಲ್ಲಿ ಹಲವರ ಪರಿಚಯ ಮಾಡಲಾಗಿದೆ. FACEBOOK LITE META COMPANY (CEO) ಎಂದು ರಾಜೀವ್ ಶುಕ್ಲಾ ಅವರನ್ನು ಪರಿಚಯ ಮಾಡಲಾಗಿತ್ತು.
ನಂತರ WHO ಹೆಲ್ತ್ ಕಾರ್ಡ್, emirates airlines (UAE) ಗೆ ಸಂಬಂಧಿಸಿದ ಮಾಹಿತಿ ಹಂಚಿಕೆಯಾಗಿದೆ. ಹೆಲ್ತ್ ಕಾರ್ಡ್ ತರಬೇತಿಗೆ ಮತ್ತು airlines ನಿಂದ ಹೊರ ದೇಶಕ್ಕೆ ಹೋಗುವ ಸಾರ್ವಜನಿಕರ ವೀಸಾ ಸಂಬಂಧಿಸಿದ ದಾಖಲಾತಿ ಪಡೆದು ಕಳಿಸಬೇಕು.
ಈ ಮೇಲ್ಗಳನ್ನು ರಾಜೀವ್ ಶುಕ್ಲಾಗೆ ಕಳಿಸಬೇಕು ಎಂದು ಹೇಳಿದ್ದ ಆರೋಪಿಗಳು, ಇದರಲ್ಲಿ ಉದ್ಯೋಗದ ಜೊತೆ ಹೂಡಿಕೆ ಮಾಡಬಹುದು ಎಂದು ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ಇದರಲ್ಲಿ ಭಾಸ್ಕರ್ ರಾವ್ ಹಾಗೂ ಕೆಲ ಪೊಲೀಸರ ಸಹಕಾರ ಇದೆ ಎಂದು ನಂಬಿಕೆ ಹುಟ್ಟಿಸಿದ್ದರು.
ಒಬ್ಬ ದೂರುದಾರರಿಂದ 1.7 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆಯಾಗಿದ್ದು, ಇದೇ ರೀತಿ ಹಲವು ಜನರಿಗೆ ಕೆಲಸದ ನೆಪದಲ್ಲಿ ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ. ಈ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿರೋ ಸೈಬರ್ ಕ್ರೈಂ ಪೊಲೀಸರು, ನೀಡಿದ್ದ ಕೆಲಸ ಏನು, ಗ್ರೂಪ್ ಮತ್ತು ದೂರುದಾರರು ತಿಳಿಸಿದ ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ.
