0 Shares

ಬೆಂಗಳೂರು : ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಹಿನ್ನೆಲೆ ಭಾರತದಲ್ಲಿ ಈಗಾಗಲೇ ಆಟೋ ಎಲ್ಪಿಜಿ ಬೆಲೆ ಲೀಟರ್ ಗೆ 10 ರಿಂದ 20 ರೂಪಾಯಿ ವರೆಗೆ ಏರಿಕೆ ಆಗಿದೆ. ದರ ಏರಿಕೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಆರ್ಥಿಕ ತಜ್ಞರು, ಯುದ್ಧ ಹೀಗೆಯೇ ಮುಂದುವರೆದರೆ ಭಾರತದ ಮೇಲೆ ದೊಡ್ಡ ಪರಿಣಾಮವಾಗಲಿದೆ ಎಂದಿದ್ದಾರೆ.

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಕಾರಣ ಅದರ ಮೂಲಕ ಭಾರತಕ್ಕೆ ಬರುವ ಸರಕುಗಳ ಸಾಗಾಟಕ್ಕೆ ಅಡ್ಡಿಯಾಗಿದೆ. ಯುದ್ದದ ಕಾರಣದಿಂದಾಗಿ ಸದ್ಯ ಗುಡ್ ಹೋಪ್ ಶಿಖರದ ಕಡೆಯಿಂದ ಹಡಗುಗಳು ಬರಬೇಕಾಗಿರುವುದರಿಂದ ವೆಚ್ಚ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞ ಪ್ರೊ. ಎಸ್​ಆರ್ ಕೇಶವ ತಿಳಿಸಿದ್ದಾರೆ.

ಯುದ್ಧದ ಪರಿಣಾಮದಿಂದ ಬೆಂಗಳೂರಿನ ಆಟೋ, ಕ್ಯಾಬ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದೆ. ಆಟೋ, ಕ್ಯಾಬ್​ಗೆ ಬಳಸುವ ಎಲ್ಪಿಜಿ ದರ ಏರಿಕೆಯಾಗಿದೆ. ಈ ಹಿಂದೆ ಆಟೋ ಎಲ್ಪಿಜಿ ದರ ಲೀಟರ್​ಗೆ 58 ರೂ. ಇತ್ತು. ನಂತರ 59 ರೂ. ಆಯಿತು ಇದೀಗ ಕೆಲ ಬಂಕ್​ಗಳಲ್ಲಿ 69.74 ರೂ. ಇದ್ದರೆ, ಕೆಲವೆಡೆ ಮಾಲೀಕರು 15 ರಿಂದ 20 ರೂ. ವರೆಗೆ ದರ ಏರಿಕೆ ಮಾಡಿಕೊಂಡಿದ್ದಾರೆ.

ಮುಂದಿನ ವಾರದಿಂದ ಆಟೋ ಎಲ್​ಪಿಜಿ ಇನ್ನಷ್ಟು ದುಬಾರಿ – ಮುಂದಿನ ವಾರದಿಂದ ಆಟೋ, ಕ್ಯಾಬ್ ಎಲ್ಪಿಜಿ ದರ ಮತ್ತಷ್ಟು ದರ‌ ಏರಿಕೆ ಆಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಆಟೋ, ಕ್ಯಾಬ್ ಬುಕ್ ಮಾಡುತ್ತಿದ್ದಂತೆಯೇ ಚಾಲಕರು ಕಿಮೀಗೆ 10 ರಿಂದ 20 ರೂಪಾಯಿ ಹೆಚ್ಚುವರಿ ಕೇಳುತ್ತಿದ್ದಾರೆ. ಆಟೋ, ಕ್ಯಾಬ್ ಮೀಟರ್ ದರ ಏರಿಕೆ ಮಾಡುವಂತೆ ಚಾಲಕರು ಸಾರಿಗೆ ಇಲಾಖೆಯ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಈಗೆಷ್ಟಿದೆ ಆಟೋ, ಕ್ಯಾಬ್ ದರ? – ಬೆಂಗಳೂರು ನಗರದಲ್ಲಿ ಆಟೋ ಮೀಟರ್ ಕನಿಷ್ಠ ದರ 36 ರೂ. ಇದೆ. ನಂತರ ಒಂದು ಕಿಮೀಗೆ 16 ರೂ.ನಂತೆ ದರ ಇರುತ್ತದೆ. ಕ್ಯಾಬ್​ಗೆ ಕನಿಷ್ಠ ದರದ ಮೇಲೆ ಒಂದು ಕಿಮೀ 24 ರೂ. ಇದ್ದು, ಅದನ್ನು 10 ರೂಪಾಯಿ ಏರಿಕೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇರಾನ್ ಮೇಲಿನ ಅಮೆರಿಕ ಇಸ್ರೇಲ್ ಯುದ್ಧದ ಪರಿಣಾಮ ಬೆಂಗಳೂರಿನ ಮೇಲೆ ದೊಡ್ಡಮಟ್ಟದಲ್ಲಿ ತಟ್ಟಲಿದ್ದು, ಒಂದು ವೇಳೆ ಯುದ್ಧ ಈ ವಾರವೂ ಮುಂದುವರಿದರೆ ದರ ಏರಿಕೆ ಬಿಸಿ ಇಲ್ಲಿನ ಜನ ಅನುಭವಿಸಬೇಕಾಗಲಿದೆ.

0 Shares

By admin

Leave a Reply

Your email address will not be published. Required fields are marked *