ಶಾಸಕರ ವಿದೇಶ ಪ್ರವಾಸ ವಿಚಾರದ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.ಶಾಸಕರು ವಿದೇಶಕ್ಕೆ ಹೋಗುವುದನ್ನೇ ಪ್ರಶ್ನೆ ಮಾಡುತ್ತಾರೆ, ಆದರೆ ಎಷ್ಟೋ ಅಧಿಕಾರಿಗಳುಸರ್ಕಾರಿ ದುಡ್ಡಿನಲ್ಲಿ ವಿದೇಶ ಪ್ರವಾಸ ಮಾಡ್ತಾರೆ, ಅದರ ಬಗ್ಗೆ ಯಾರು ಕೇಳಲ್ಲ ಯಾಕೆ? ಎಂದು ಪ್ರಶ್ನಿಸಿದರು.
ಸ್ವಂತ ಖರ್ಚಿನಲ್ಲಿ, ಖಾಸಗಿ ಬದುಕಿನಲ್ಲಿ ಶಾಸಕರು ಹೊರಗೆ ಹೋದರೆ ಅದನ್ನು ತಪ್ಪು ಎನ್ನುವುದು ಸರಿಯಲ್ಲ ಎಂದರು. ಸದುದ್ದೇಶದಿಂದ ವಿದೇಶಕ್ಕೆ ಹೋಗಿ, ಅಲ್ಲಿನ ಒಳ್ಳೆಯ ಅಂಶಗಳನ್ನು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದೇ ಎಂದರು. ರಾಜಕೀಯದಲ್ಲಿ ಪ್ರತಿಯೊಂದಕ್ಕೂ ಬೇರೆ ಬೇರೆ ಅರ್ಥ ಮಾಡಿಕೊಳ್ಳುತ್ತಾರೆ, ಆದರೆ ಪ್ರತಿಯೊಂದನ್ನೂ ವಿವಾದ ಮಾಡುವುದೇ ರಾಜಕಾರಣ ಅಲ್ಲ ಎಂದು ಹೇಳಿದರು.
ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗುತ್ತದೆ ಎಂಬುದು ಸುಳ್ಳು, ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ ಅಂದ್ರೆ ಯಥಾಸ್ಥಿತಿಯೇ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಮಹಿಳಾ ಮೀಸಲಾತಿ ಜಾರಿಯಾದರೆ ತಮ್ಮ ಪುತ್ರಿ ರಶ್ಮಿ ರಾಜಣ್ಣ ಅವರನ್ನೇ ರಾಜಕೀಯಕ್ಕೆ ನಿಲ್ಲಿಸುವುದಾಗಿ ಕೆ.ಎನ್. ರಾಜಣ್ಣ ಹೇಳಿದರು.
